OBJECTIVITY :
ಇದೋಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು 27 ವರ್ಷಗಳಿಂದಲು ಹಿರಿಯನಾಗರಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಹಿರಿಯ ನಾಗರಿಕರ ಹಾಗೂ ಅವರ ಸೇವೆಯ ಜೊತೆಗೆ ಸಂತೋಷ ಮತ್ತು ನೆಮ್ಮದಿಯ ಜೀವನವನ್ನು ಜೀವನವನ್ನು ದೊರಕಿಸಿ ಕೊಡುವ ಕಾರ್ಯ ಮಾಡುತ್ತಾ ಬಂದಿರುತ್ತದೆ. ವಯೋವೃದ್ಧರಿಗೆ ಮೂಲಭೂತ ಸೌಲಬ್ಯಗಳನ್ನು ಕಲ್ಪಿಸುವುದರ ಮೂಲಕ ಅವರ ಜೀವನ ಗುಣಮಟ್ಟವನ್ನು ಅಭಿವೃದ್ಧಿಪಡಿಸಿ ಆ ಮೂಲಕ ಅವರಲ್ಲಿ ಜೀವನೋತ್ಸಾಹವನ್ನು ತುಂಬುವದು,ಹಿರಿಯ ನಾಗರಿಕರಿಗೆ ಸರ್ಕಾರಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ಸಿಗುವಂತಹ ಎಲ್ಲ ರೀತಿಯ ಸೇವೆಗಳನ್ನು ದೊರಕಿಸಿಕೊಡುವುದು ಈಗಿನ ದಿನಮಾನಗಳಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತು ತಮ್ಮ ಕುಟುಂಬವಾಯಿತು ಎಂಬ ಇಂದಿನ ಪೀಳಿಗೆಯ ಯುವ ಸಮೂಹ ಸ್ವಾರ್ಥಪರ ಜೀವನ ನಡೆಸುವ ಮೂಲಕ ತಮ್ಮ ಮಕ್ಕಳಿಂದ ನಿರ್ಲಕ್ಷಿತ ವೃದ್ಧಾಪ್ಯ ಅಂಚಿನಲ್ಲಿರುವ ತಂದೆ ತಾಯಿಯಂದಿರು ಇತ್ತ ಬದುಕಲೂ ಆಗದೆ ಬದುಕುತ್ತಿರುವ ಹಿರಿಯ ಜೀವಿಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಜನ್ಮ ನೀಡಿದ ಮಕ್ಕಳು, ಮೊಮ್ಮಕ್ಕಳು , ಸಂಭದಿಕರು ಪ್ರೀತಿ, ವಾತ್ಸಲ್ಯ, ಮಮತೆ ಹಾಗೂ ಕರುಣೆಯಿಂದ ವಂಚಿತರಾದ ವೃದ್ಧರು ಮನೆ ಬಿಟ್ಟು ಬಂದ ಪ್ರೀತಿಯಿಂದ ನೋಡಿಕೊಳ್ಳುವ ಮತ್ತು ಅರೈಕೆ ಮಾಡುವ ಮನಸ್ಥಿತಿ ಬೇಕಾಗಿರುತ್ತದೆ.
ವೃದ್ಧಾಶ್ರಮಗಳು ಹಿರಿಯನಾಗರಿಕರಿಗೆ ತಮ್ಮ ಕುಟುಂಬಗಳೊಂದಿಗೆ ಇರಲು ಸಾಧ್ಯವಾಗದ ಹಾಗೂ ನಿರ್ಗತಿಕರಾಗಿರುವ ಆಶ್ರಯ ನೀಡುತ್ತಾ ಇರುತ್ತವೆ. ಎಲ್ಲಿಯೂ ಹೋಗಲು ಸಾಧ್ಯವಾಗದ ಮತ್ತು ಅವರನ್ನು ಬೆಂಬಲಿಸಲು ಯಾರೂ ಇಲ್ಲದ ವೃದ್ಧರಿಗೆ ವೃದ್ಧಾಶ್ರಮಗಳು ಸುರಕ್ಷಿತ ತಾಣವನ್ನು ಒದಗಿಸುತ್ತವೆ. ಅವರಿಗೆ ಮನೆಯ ವಾತಾವರಣದಂತಹ ಕುಟುಂಬವನ್ನು ಸೃಷ್ಠಿಸುತ್ತವೆ, ಹಿರಿಯ ನಾಗರಿಕರು ತಮ್ಮ ಸಂತೊಷ ಮತ್ತು ದುಃಖಗಳನ್ನು ಪರಸ್ಪರ ಹಂಚಿಕೊಂಡಾಗ ಭದ್ರತೆ ಮತ್ತು ಸ್ನೇಹಪರತೆಯನ್ನು ಅನುಭವಿಸುತ್ತಾರೆ. ಹಿರಿಯರನ್ನು ಗೌರವದಿಂದ ಕಾಣುವ ಪರಂಪರೆಯೊಣದು ಈ ದೇಶಕ್ಕಿದೆ, “ ಮಾತೃ ದೇವೋ ಭವ, ಪಿತೃ ದೇವೋಭವ” ಎಂಬ ಈ ಪದಗುಚ್ಚ ಈ ದೇಶದಲ್ಲಿ ಪ್ರಚಲಿತದಲ್ಲಿದೆ. ತಂದೆ ಮತ್ತು ತಾಯಿಯು ದೇವನಿಗೆ ಸಮಾನವೆಂಬಷ್ಟು ಗೌರವಾರ್ಹ ಭಾವನೆಯು ನಮ್ಮ ಸಂಸ್ಕೃತಿಯ ಭಾಗವಾಗಿ ಬಿಟ್ಟಿದೆ.
ಮುಂದುವರಿದ ಜನಸಂಖ್ಯೆಲ್ಲಿ ಕಡಿಮೆ ಇರುವ ರಾಷ್ಟ್ರಗಳಿಗೆ ಹೋಲಿಸಿದರೆ. ಜನಸಂಖ್ಯೆಯಲ್ಲಿ ಎಷ್ಟೋಪಾಲು ಅಧಿಕವಿರುವ ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ.ಎಲ್ಲ ರಾಜ್ಯಗಳಲ್ಲಿರುವ ವೃದ್ಧಾಶ್ರಮಗಳ ಸಂಖ್ಯೆ 500 ನ್ನು ಮೀರುವುದಿಲ್ಲ 10 ಕೋಟಿಗಿಂತಲು ಅಧಿಕ ವೃದ್ಧರಿರುವ ದೇಶವಂದಕ್ಕೆ 500 ರಷ್ಟು ವೃದ್ಧಾಶ್ರಮಗಳು ಸಾಲಬಹುದೇ ಎಂಬುವುದು ಒಂದು ಪ್ರಶ್ನೆಯಾದರೆ ವೃದ್ಧರಿಗೆ ವೃದ್ಧಾಶ್ರಮಗಳ ಅಗತ್ಯವಿದೆಯೇ ಎಂಬ ಪ್ರಶ್ನೆಯು ಇದರ ಜೊತೆ-ಜೊತೆಗೂ ಹುಟ್ಟಿಕೊಳ್ಳುತ್ತದೆ.
ಹುಟ್ಟುವಾಗ ಯಾರೂ ವೃದ್ಧರಾಗಿ ಹುಟ್ಟುವುದಿಲ್ಲ. ಮಗುತನ, ಹದಿಹರೆಯ ಯವ್ವನ, ನಡುವಯಸ್ಸನ್ನು ದಾಟೀಯೇ ಪ್ರತಿಯೊಬ್ಬರು ವೃದ್ಧಸ್ಥಿತಿಗೆ ತಲುಪುತ್ತಾರೆ. ಇದೊಂದು ಪ್ರಕ್ರಿಯೆ ಮಗುವಾಗಿದ್ದವರು ವಿವಿಧ ಹಂತಗಳನ್ನು ದಾಟಿ ವೃದ್ಧಾವಸ್ಥೆಗೆ ತಲುಪುವಾಗ ಅವರಮಕ್ಕಳು ಅವರನ್ನು ಹಿಂಬಾಲಿಸುತ್ತಾ ಇರುತ್ತಾರೆ. ಹತ್ತವರು ದುಡಿಯುವದು ತಮ್ಮ ಇಷ್ಟಗಳನ್ನು ಪೂರೈಸುವದು ಶಾಲಾ ಖರ್ಚು-ವೆಚ್ಚಗಳನ್ನು ನೋಡಿಕೊಳ್ಳುವದು, ಸುತ್ತಾಡಿಸುವದು ಪ್ರತಿದಿನ ಈ ಮಕ್ಕಳ ಮುಂದೆಯೇ ನಡೆಯುತ್ತಿರುತ್ತವೆ. ಪವಿತ್ರ ಕುರಾನ್ ವೃದ್ಧ ಹೆತ್ತವರ ಆರೈಕೆಯ ಸಂಪೂರ್ಣ 98 ಹೊಣೆಯನ್ನು ಅವರ ಮಕ್ಕಳ ಮೇಲೇಯೇ ಹೇರಿದೆ. ದೇಶ್ಯಾದ್ಯಂತ ವರದಿ ಮತ್ತು ಮಾಧ್ಯಮಗಳಲ್ಲಿ ನಾವು ಆಗಾಗ ಓದುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ ಹಿರಿಯ ನಾಗರಿಕರ ಪಾಲನೆ ಪೊಷಣೆಯಲ್ಲಿ ಬಿರುಕು ಮೂಡಿರುವದು ಅಪಾಯಕಾರಿ ಹಂತಕ್ಕೆ ತಲುಪುತ್ತಿರುವುದು ಸ್ಪಷ್ಠವಾಗುತ್ತಿದೆ.ಪ್ರತಿ ಮೂವರಲ್ಲಿ ಓರ್ವ ವೃದ್ಧರು ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಮತ್ತು ನಿಂದನೆಯ ಮಾತುಗಳನ್ನು ಆಲಿಸುತ್ತಾರೆ ಎಂದು ತಿಳಿದು ಬಂದದೆ. ವೃದ್ಧರು ತಮ್ಮ ವಯಸ್ಸನ್ನು ಭಾರವಾಗಿ ನೋಡದಂತಹ ನೆಮ್ಮದಿ ವಾತಾವರಣವನ್ನು ನಿರ್ಮಿಸುವುದು ಹೇಗೆ ? ಪ್ರತಿಭಟನೆ ಮಾಡುವಂತ ವಯಸ್ಸು ಅವರದಲ್ಲ. ಪರಸ್ಪರ ನೋವು-ನಲಿವು ಹೇಳಿಕೊಳ್ಳುವುದು ಅಪಾಯಕಾರಿಯಾಗಿದೆ. ಇಂತಹ ಸ್ಥಿತಿಯಲ್ಲಿ ಹಿರಿಯ ಜೀವಿಗಳಿಗೆ ಸೌಖ್ಯ ಭಾವ ಒದಗಿಸಿ ಕೊಡುವ ವೃದ್ಧಾಶ್ರಮಗಳಲ್ಲಿ ಸಾಧ್ಯವಾಗುತ್ತದೆ.
ಮುಖ್ಯವಾಗಿ, ವೃದ್ಧ ಹೆತ್ತವರನ್ನು ಗೌರವದಿಂದ ಕಾಣುವಂಥ ಶುದ್ಧ ಮನಸ್ಸನ್ನು ಮಕ್ಕಳು ಸಂಬಂದಿಕರು ಬೆಳೆಸಿಕೊಳ್ಳಬೇಕು. ಚಿಕ್ಕಂದಿನಲ್ಲೇ ಆಯಾ ಹೆತ್ತವರು ತಮ್ಮ ಮಕ್ಕಳಲ್ಲಿ ತಂದೆ-ತಾಯಿ ಬಗ್ಗೆ ಉತ್ತಮ ಮನೋಭಾವನೆ, ಸಂಸ್ಕಾರ ಸಂದರ್ಭ ಸನ್ನಿವೇಶ ಅನುಸಾರವಾಗಿ ಬಿತ್ತಬೇಕು. ಮುಂದಿನ ತಲೆಮಾರು ಹೆತ್ತ ತಂದೆ-ತಾಯಿಯರಿಗೆ ವೃದ್ಧಾಶ್ರಮಗಳನ್ನು ಪರ್ಯಾಯ ಮನೆಯಾಗಿ ಕಂಡುಕೊಳ್ಳದಂತೆ ಪ್ರೇರೇಪಣೆ ನೀಡಬೇಕು. ಹಿರಿಯ ಜೀವಿಗಳಿಗೆ ವೃದ್ಧಾಶ್ರಮಗಳು ಅನಿವಾರ್ಯಕಾರಣಗಳ ಹೊರತು ಪರಿಹಾರ ಆಗಬಾರದು. ಆಧುನಿಕ ಪರಿಹಾರ ಕ್ರಮವಾಗಿ ವೃದ್ಧಾಶ್ರಮಗಳನ್ನು ನೆಚ್ಚಿಕೊಳ್ಳಬಹುದು. ವೃದ್ಧಪ್ಯ ಎನ್ನುವದು ಸಹಜ ಸ್ಥಿತಿ ಮನಸ್ಸಿನಲ್ಲಿ ಸದುದ್ದೇಶವಿದ್ದು ಸನ್ಮಾರ್ಗದಲ್ಲಿ ಪ್ರಯತ್ನಶೀಲರಾದರೆ ಮುಪ್ಪು ಮುದೂಡಬಹುದು. ವೃದ್ಧರ ಹೊಣೆ ಹುರುವುದು ಮಾನವೀಯ ಗುಣವೇ. ಹಣ್ಣೆಲೆಗೂ ಅದರದೇ ಸ್ಥಾನ-ಮಾನ ಇರುವುದು . ಮನೆಯ ಮಂದಿ ಎಲ್ಲರು ಕಿರಿಯರಿಗೆ ತಂದೆ-ತಾಯಿಯ ಕುರಿತು ಪೂಜ್ಯ ಭಾವನೆ ಬೆಳೆಸೆ ಎಳೆಯರಿಗೆ ಮಾದರಿಯಾಗಬೇಕು.
ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶ. ಇಂದು ಯುವ ಪೀಳಿಗೆಯು ಸಾಮಾಜಿಕ ಸಂಬಂಧಗಳು ಸಮಸ್ಯೆಗಳನ್ನು ನಿಭಾಯಿಸುವಲ್ಲಿ ತಂತ್ರಜ್ಞಾಣ ಹಣದ ವ್ಯಾಮೋಹ ನಾನು,ನನ್ನದು,ನನ್ನ ಕುಟುಂಬ ಎಂಬ ಸ್ವಾರ್ಥಪರ ಜೀವನದಿಂದ ಹಿರಿಯ ಜೀವಿಗಳಿಗೆ ಪಾಲನೆ ಪೋಷಣೆ ಮಾಡದೆ ಅವರ ಬಗ್ಗೆ ಅನುಕಂಪ ಪ್ರೀತಿ ಅವರ ಆಸೆ ಆಕಾಂಕ್ಷ ಮೂಲಭೂತ ಅಗತ್ಯತೆಗಳನ್ನು ಹಾಗೂ ಅವರ ಭಾವನೆಗಳಿಗೆ ಬೆಲೆ ಕೊಡದೆ. ವೃದ್ಧಾಶ್ರಮಕ್ಕೆ ದಾಖಲು ಮಾಡುವ ಮನಸ್ಥಿತಿ ಎದುರಾಗಿದೆ. ಹಿರಿಯರು ಕುಟುಂಬದ ಆಧಾರ ಸ್ಥಂಬ ಅವರ ಜೀವಕ್ಕೆ ವರ್ಷಗಳು ತುಂಬಿವೆ. ಹಿರಿಯರ ಜೀವ ತುಂಬವ ಕೆಲಸವನ್ನು ಪುಣ್ಯದ ಮಾನವೀಯ ಗುಣವೆಂದು ಭಾವಿಸಿ ಮಾನವೀಯತೆ ಹಣತೆಯಂತೆ ಕಾರ್ಯನಿರ್ವಹಿಸುವ ಸಂಜೀವಿನಿಯೇ “ ವೃದ್ಧಾಶ್ರಮ”.

